ಮೈಸೂರಿನ ಎಂ. ಎಂ. ಕೆ. ಮತ್ತು ಎಸ್. ಡಿ. ಎಂ ಕಾಲೇಜಿನಲ್ಲಿ ಮಹಿಳಾ ವಿದ್ಯಾರ್ಥಿಗಳಿಗೆ ಕ್ಯಾಂಪಸ್ ಪ್ಲೇಸ್ಮೆಂಟ್ ಡ್ರೈವ್


ಮೈಸೂರಿನ ಎಂ. ಎಂ. ಕೆ. ಮತ್ತು ಎಸ್. ಡಿ. ಎಂ ಕಾಲೇಜಿನಲ್ಲಿ ಇದೆ ತಿಂಗಳ ಮಾರ್ಚ್ 12 ರಂದು ಮಹಿಂದ್ರಾ ಪ್ರೈಮ್ ಕ್ಲಾಸ್ರೂಮ್ ನ ನಾಂದಿ ಫೌಂಡೇಶನ್ ಸಹಯೋಗದಲ್ಲಿ ಉದ್ಯೋಗ ಉತ್ಸವ್ (ಜಾಬ್ ಪ್ಲೇಸ್ಮೆಂಟ್)2024 ಹೆಸರಿನ ಕ್ಯಾಂಪಸ್ ಪ್ಲೇಸ್ಮೆಂಟ್ ಡ್ರೈವ್ ಆಯೋಜಿಸಲಾಗಿದೆ. ಡ್ರೈವ್ ನಲ್ಲಿ ಎಕ್ಸ್ಪರ್ಟ್ ಕಾಲರ್ಸ್ ಪ್ರೈ ಲಿ., ಮೆಡ್ ಪ್ಲಸ್, ಸ್ಪಂದನ ಬ್ರೈಟ್ ಫ್ಯೂಚರ್ ಇನ್ನೋವೆಷನ್ಸ್, ಕ್ರಿಯೇಟಿವ್ ಎಂಜಿನೇರ್ಸ್, ಕ್ರೆಡಿಟ್ ಅಕ್ಸಸ್ ಗ್ರಾಮೀಣ್ ಲಿ., ಕ್ಯೂಸ್ ಕಾರ್ಪ್, Essevee RecruiTch, 24/7, ಮತ್ತು ಪಿರಮಲ್ ಫೈನಾನ್ಸ್ ಸೇರಿದಂತೆ ಹತ್ತಕ್ಕೂ ಹೆಚ್ಚು ಕಂಪನಿಗಳು ಭಾಗವಹಿಸಲಿದ್ದಾರೆ. ಪೂಲ್ ಡ್ರೈವನ್ನು ಎಸ್. ಡಿ. ಎಂ ಕಾಲೇಜಿನ ಪ್ರಾಂಶುಪಾಲರ ನಿರ್ದೇಶದಂತೆ ಮಹಿಳಾ ವಿದ್ಯಾರ್ಥಿಗಳಿಗೆ ಆಯೋಜಿಸಲಾಗಿದ್ದು ಇದರಲ್ಲಿ ಎಸ್ ಡಿ ಮ್ ನ 318 ಕ್ಕೂ ಹೆಚ್ಚಿನ ಅಂತಿಮ ಪದವಿ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿನಿಯರು, ಶಾರದಾ ವಿಲಾಸ್ ಕಾಲೇಜಿನ 65, ಹಿರಿಯೂರಿನ ವೇದವತಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ 65 ವಿದ್ಯಾರ್ಥಿನಿಯರು ಭಾಗವಹಿಸಲಿದ್ದಾರೆ. ಉದ್ಘಾಟನಾ ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಪ್ರೊಫೆಸರ್ ಸಾಯಿನಾಥ್ ಮಲ್ಲಿಗೆಮಾಡು ರವರು ಅಧ್ಯಕ್ಷತೆವಹಿಸಲಿದ್ದಾರೆ, ನಾಂದಿ ಫೌಂಡೇಶನ್ ನ ಶ್ರೀಮತಿ ಶ್ರೀಲಕ್ಷ್ಮಿ, ಶ್ರೀಮತಿ ಜೋಲಿನ್, ಕಾಲೇಜಿನ ಐ. ಕ್ಯೂ. ಎ. ಸಿ. ಸಂಚಾಲಕರಾದ ಶ್ರೀಮತಿ ಕೆ. ಎಸ್. ಸುಕೃತ, ಪ್ಲೇಸ್ಮೆಂಟ್ ಅಧಿಕಾರಿ ಎಸ್. ಮಹದೇವಸ್ವಾಮಿ, ಪ್ಲೇಸ್ಮೆಂಟ್ ಸಮಿತಿಯ ಸದಸ್ಯರುಗಳು ಮತ್ತು ವಿದ್ಯಾರ್ಥಿನಿಯರು ಭಾಗವಹಿಸಲಿದ್ದಾರೆ.

Download Invitation
..